ರಾಯಚೂರು: ತಾಲೂಕಿನ ಯರಮರಸ್ ಗ್ರಾಮದ ನಿವಾಸಿ, ಹಿರಿಯರಾದ ಮಲ್ಲಮ್ಮ ಗೌಡಸಾನಿ ಮಾಲಿಪಾಟೀಲ್ (75) ಅವರು ವಯೋಸಹಜ ಅನಾರೋಗ್ಯದಿಂದ ಸೋಮವಾರ ಬೆಳಗಿನ ಜಾವ ನಿಧನರಾದರು.

ಮೃತರು ದಿವಂಗತ ಬಸವರಾಜಪ್ಪ ಗೌಡ ಮಾಲಿಪಾಟೀಲ್ ಅವರ ಪತ್ನಿಯಾಗಿದ್ದು, ರಾಯಚೂರು ನಗರಸಭೆಯ ಮಾಜಿ ಸದಸ್ಯ ಈರಪ್ಪ ಗೌಡ ಮಾಲಿಪಾಟೀಲ್ ಅವರ ಅತ್ತಿಗೆ ಹಾಗೂ ಪ್ರಕಾಶ್ ಮಾಲಿಪಾಟೀಲ್ ಅವರ ತಾಯಿಯಾಗಿದ್ದರು.

ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು, ನಿವೃತ್ತ ಬ್ಯಾಂಕ್ ಮ್ಯಾನೇಜರ್ ಶಿವರಾಜಪ್ಪ ಗೌಡ ಮಾಲಿಪಾಟೀಲ್ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಮಲ್ಲಮ್ಮ ಅವರ ನಿಧನದಿಂದ ಕುಟುಂಬಸ್ಥರು ಹಾಗೂ ಬಂಧುಮಿತ್ರರಲ್ಲಿ ಶೋಕ ಮಡುಗಟ್ಟಿದೆ.

ಮೃತರ ಅಂತ್ಯಕ್ರಿಯೆಯನ್ನು ನವೆಂಬರ್ 10ರಂದು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಯರಮರಸ್ ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.